ಶ್ರೀ ಗುರುರಾಯರ 917 ನೇ ಭಜನೆ
ಶ್ರೀ ಗುರುರಾಯರ 917 ನೇ ಭಜನೆ
ಕೈಹಿಡಿದು ಮುನ್ನಡೆಸುವ ಪ್ರಭು
ಇನ್ನೂ ಕೋಪವೇ ಎನ್ನ ಮೇಲೆ
ಅಳಿಸಿ ಈ ಮನದ ದುಗುಡವನು
ತೋರು ಬದುಕಿಗೆ ನಿನ್ನ ಲೀಲೆ. |ಪ|
ಕಾರ್ಮೋಡದಂಥ ಕಷ್ಟಗಳನೆಲ್ಲ
ನಿಮಿಷದಲಿ ಚದುರಿಸಿದೆ ಅಂದು
ಮುಂದೆ ದಾರಿ ಕಾಣದೆ ಕುಳಿತ
ಭಕ್ತನಿಗೆ ದಾರಿ ತೋರು ಇಂದು. |1|
ನೀ ಕೈಹಿಡಿದ ಧೈರ್ಯಕೆ ನಾನು
ಬದುಕಲ್ಲಿ ಮುಂದೆ ಸಾಗಿದವನು
ಇಂದು ನಡುಹಾದಿಯಲಿ ಬಿಟ್ಟರೆ
ಯಾರ ಮೊರೆ ಹೋಗಲಿ ಇನ್ನು. |2|
ಬದುಕೊಂದು ವಿಧಿಯಾಟವಿರೆ
ನೀ ಮಾತ್ರ ಬದಲಿಸಬಲ್ಲೆಯಲ್ಲ
ನೀನೂ ಕೇಳದೆ ಹೋದರೆ ಇನ್ನು
ವಿಧಿಗೆ ತಲೆಬಾಗಿಸಬೇಕಾಯಿತಲ್ಲ. |3|
ಇಷ್ಟು ದಿನ ಬದುಕಿನ ದೋಣಿಗೆ
ನಾವಿಕನಾಗಿ ಮುನ್ನಡೆಸಿದೆ ತಂದೆ
ನಡುನೀರಿನಲ್ಲಿಯೆ ಬಿಟ್ಟುಬಿಟ್ಟರೆ
ಮುಳುಗದೆ ಬೇರೆ ದಾರಿ ಎಲ್ಲಿದೆ. |4|
ರಚನೆ ಅಚ್ಯುತ ಕುಲಕರ್ಣಿ
Comments
Post a Comment