ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಮಿತ್ರ Naik
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಮಿತ್ರ
Belated birthday wishes
ಇಂದಿನ ದಿನದ ಖುಷಿಯು
ಎಲ್ಲ ಮಿತ್ರರ ನಡುವೆಯೂ
ಸ್ನೇಹಭಾವದಲಿ ನಿನ್ನ ಆಲಿಂಗಣ
ಎಲ್ಲ ಮಿತ್ರರಿಗೂ ಸದಾ ತೆರೆದ ಮನ
ನಗುವ ನಗಿಸುವ ನಿನ್ನ ಮನ
ಬದುಕಿನ ದ್ವಾರಕೆ ತೋರಣ
ಎಲ್ಲರ ಸ್ವಾಗತ ಸಂಭ್ರಮ ತರಲಿ
ಹುಟ್ಟಿದ ದಿನಕೂ ಹೊಸತನ ಕೊಡಲಿ
ನೀ ನಡೆದ ಬದುಕಿನ ಹಾದಿ
ಬೀರಿತು ಸದಾ ಪ್ರೀತಿಯ ಮೋಡಿ
ಎಲ್ಲರ ಜೊತೆಗೆ ಬದುಕು ಸಾಗುತ
ಅವಶ್ಯ ತಲುಪುವೆ ನಿನ್ನಿಚ್ಛೆಯ ಗುರಿಯತ್ತ
ಮಿತ್ರರ ಸಂಗದಲಿ ಬದುಕಿಗೆ ತಂಪು
ಹೃದಯ ಬಿಚ್ಚಿ ನಗು ತರುವದು ಕಂಪು
ಇದರಿಂದ ನಿನ್ನ ಸಂಸಾರಕೆ ಹರ್ಷ
ಅವಶ್ಯ ನೀ ಬದುಕುವೆ ನೂರು ವರ್ಷ
ಪ್ರತಿ ಹೆಜ್ಜೆಯೊಂದಿಗೆ ಸಂಭ್ರಮ
ಆಗಲಿ ಬದುಕಿನ ಚಿತ್ರ ವಿಹಂಗಮ
ಮಿನುಗುವ ನಕ್ಷತ್ರ ನೆನಪಿಸಿತು
ನೀ ಎನ್ನ ಪ್ರೀತಿಯ ಮಿತ್ರನೆಂದು ಸಾರಿ ಹೇಳಿತು
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಮಿತ್ರ
ಅಚ್ಯುತ ಕುಲಕರ್ಣಿ
Comments
Post a Comment