ಶ್ರೀ ಗುರುರಾಯರ 775 ನೇ ಭಜನೆ
ನನ್ನ ಆತ್ಮೀಯರೇ,
ಶ್ರೀ ಗುರುರಾಯರ ಚರಣಕಮಲಕ್ಕೆ 775 ನೇ ಭಜನಾ ಪುಷ್ಪ ಸಮರ್ಪಣೆ ಮಾಡುತ್ತಿರುವೆನು ನನ್ನ ಪ್ರತಿಯೊಂದು ಭಜನೆಯ ಹಾಡು you tube ನಲ್ಲಿ ಶ್ರೀ ದತ್ತಾತ್ರೇಯ ಅವರ ಧ್ವನಿಯಲ್ಲಿ ಕೇಳಬಹುದು. YouTube ನಲ್ಲಿ achyutkulkarni1024 search & subscribe ಮಾಡಿ.ಹೃತ್ಪೂರ್ವಕ ವಂದನೆಗಳು
ಪ್ರಭು ರಾಘವೇಂದ್ರ ನಿನ್ನ ಸ್ಮರಣೆ
ನನ್ನ ಈ ಬದುಕಿಗೆ ಕೊಟ್ಟಿದೆ ರಕ್ಷಣೆ
ಏನು ಮಹಿಮೆಯೊ ಪ್ರಭು ನಿನ್ನದು
ಜೀವನ ಸುಸೂತ್ರವಾಗಿದೆ ನನ್ನದು. |ಪ|
ನಿನ್ನ ಒಮ್ಮೆ ನೋಡಿದರೂ ಸಾಕು
ಪ್ರೀತಿಯ ಸುಧೆ ಕಂಡಿತು ಬದುಕು
ಯಾರಿಲ್ಲ ಎನ್ನ ಜೊತೆ ಎನ್ನುವದೇಕೆ
ಪ್ರಭು ನೀನೆ ಜೊತೆಗೆ ಇರುತಿರಲಿಕ್ಕೆ. |1|
ನಿನ್ನ ಭಜನಾಮೃತ ಎನಗೆ ಉಸಿರು
ಮಾಡಿದೆ ನನ್ನೀ ಬದುಕನು ಹಸಿರು
ರಾಘವೇಂದ್ರನ ಭಜನೆ ಮಾಡುತ
ಬದುಕಿಂದು ಹೊಸ ಸ್ಪೂರ್ತಿಯತ್ತ. |2|
ನನ್ನ ನಿನ್ನ ನಡುವೆ ಎಂಥ ಬಂಧವು
ಬಂಧು ಬಳಗವ ಮೀರಿ ಸಂಬಂಧವು
ಸುಖದಲ್ಲೂ ನೀನೇ ನೆನಪಿಗೆ ಬಂದೆ
ದುಃಖದಲೂ ನಿನ್ನನೇ ನಾನು ಕರೆದೆ. |3|
ಕರುಣಿಸು ಪ್ರಭು ಸದಾ ಪ್ರೀತಿಯನು
ಮೂರು ಕಾಲಕ್ಕೂ ನಿನ್ನ ಭಕ್ತಿಯನು
ಏನೂ ಕೇಳದೆ ಎಲ್ಲ ನೀ ಕೊಟ್ಟವನು
ನೀ ಎನ್ನ ಬದುಕಿಗೆ ಆದೆ ಕಾಮಧೇನು. |4|
ಅಚ್ಯುತ ಕುಲಕರ್ಣಿ
Whatsapp9424890064
Comments
Post a Comment