Posts

Showing posts with the label ರಚನೆ ಅಚ್ಯುತ ಕುಲಕರ್ಣಿ

ಶ್ರೀ ಗುರುರಾಯರ 918 ನೇ ಭಜನೆ

ಶ್ರೀ ಗುರುರಾಯರ 918 ನೇ ಭಜನೆ ನನ್ನ ಬದುಕಿನ ಪ್ರತಿಕ್ಷಣಕೂ ಪ್ರಭುವೇ ನಿನ್ನದೇ ಕೃಪೆಯು ಹೇಗೆ ಬಣ್ಣಿಸಲಿ ಎನ್ನ ತಂದೆ ನೆಮ್ಮದಿಯೆ ನಿನ್ನ ಜೊತೆಯು.     |ಪ| ನಿನ್ನನು ಮರೆತ ಕ್ಷಣದಿಂದಲೆ ಘೋರ ಅಂಧತ್ವ ಬದುಕಿಗೆ ಕೈಹಿಡಿದು ನೀ ನಡೆಸುತಲಿರೆ ದಿವ್ಯ ಚೇತನ ಪ್ರಾಪ್ತಿ ಎನಗೆ.       |1| ಕಡುಬಿಸಿಲು ಬೇಗೆಯಿಹುದು ನೀ ಎನ್ನ ಕೈ ಬಿಟ್ಟ ಕ್ಷಣದಿಂದ ಮನಕೆಲ್ಲ ತಂಪು ಪಡೆದಂತೆ ಪ್ರಭುವೆ ಕೈ ಹಿಡಿದ ಕ್ಷಣದಿಂದ       |2| ಈ ಜೀವಕೆ ಉಸಿರು ನಿನ್ನ ಭಕ್ತಿ ಎಂದು ನಾ ಸದಾ ಅರಿತಿರುವೆ ಬದುಕಿನ ರಾಗ ತಾಳಕೆ ಸ್ಫೂರ್ತಿ ನಿನ್ನ ಕೃಪೆಯ ಉಪಕಾರವೇ.         |3| ನಿನ್ನ ನೆರಳಲ್ಲಿಯೇ ಜೀವನವು ಸದಾ ನಡೆಯುತ್ತ ಸಾಗುತಿರಲಿ ನಿನ್ನ ಮರೆಯದ ಮನ ಎಂದೂ ಸದಾ ಎನ್ನ ಪಾಲಿಗೆ ದೊರಕಲಿ.      |4| ರಚನೆ ಅಚ್ಯುತ ಕುಲಕರ್ಣಿ