ಯಾರು ಭಿಕ್ಷುಕ

ಪ್ರಿಯ ಮಿತ್ರರೇ,

ಕವಿತೆಯ ಶೀರ್ಷಿಕೆ ಯಾರು ಭಿಕ್ಷುಕ
ಕವಿತೆ ಓದಿದಂತೆ ತಾನಾಗಿಯೇ ತಿಳಿಯುವದು ಯಾರೆಂದು
ಹೃತ್ಪೂರ್ವಕ ವಂದನೆಗಳು

ಅಚ್ಯುತ ಕುಲಕರ್ಣಿ

ಮಂದಿರದ ಹೊರಗೆ ಕೈಯೊಂದು ಚಾಚಿ
ಕೇಳಿತು ಭಿಕ್ಷೆ ಅದೆಷ್ಟು ಅಂಗಲಾಚಿ
ನನ್ನಲ್ಲಿ ಕನಿಕರ ಮತ್ತು ಅಸಡ್ಡೆ ಎರಡೂ
ಈತನ ಕಣ್ತಪ್ಪಿಸಿ ಒಳಗೆ ಹೋಗಲೆಂದು

ಹೌದು ನಾನೂ ಕೇಳುವದಕ್ಕೆ ಬಂದಿದ್ದು
ಮಂದಿರದ ಒಳಗೆ ದೇವರಿಗೆ ಕೈಮುಗಿದದ್ದು
ಭಿಕ್ಷುಕನಂತೆ ಒಂದೆರಡು ರೂಪಾಯಿ ಅಲ್ಲ
ಪೂರ್ತಿ ಭವಿಷ್ಯಕೆ ಉಜ್ವಲತೆ ಬೇಕಲ್ಲ

ಭಿಕ್ಷುಕನ ಧ್ವನಿಯಲ್ಲಿ ದೀನಾಯತೆ ಇತ್ತು
ನಾ ಕೊಟ್ಟೇ ಕೊಡುವೆನೆಂಬ ನಂಬಿಕೆಯೂ ಇತ್ತು
ಯಾವ ಅಹಂ ಇಲ್ಲದೆ ಸರಳವಾಗಿ ಅಂದಿದ್ದ
ಅಪ್ಪಾ ತಂದೆ ಒಂದೆರಡು ರೂಪಾಯಿ ನೀಡೆಂದ

ನನ್ನ ಧ್ವನಿಯಲ್ಲಿ ಔಪಚಾರಿಕತೆ ಇತ್ತು
ಜೊತೆಗೆ ದೇವರು ಕೊಡುವ ವಿಶ್ವಾಸ ಮಾಯವಾಗಿತ್ತು
ಅದೇನು ಬಿಗುಮಾನ ದೇವರಲಿ ಕೇಳಲು
ಅಂಗಲಾಚಿ ಬೇಡುವದಂತೂ ದೂರವೇ ಆಗಿರಲು

ದೇವರು ಒಲಿದನು ಆ ಭಿಕ್ಷುಕನಿಗೆ
ನನ್ನಿಂದ ಕೊಡಿಸಿದನು ರೂಪಾಯಿ ಅವನಿಗೆ
ಪೂರ್ತಿ ಜನ್ಮ ಕಳೆದರೂ ಈಡೇರಲಿಲ್ಲ
ನನ್ನ ಹುಸಿ ಬೇಡಿಕೆಗೆ ದೇವರು ಕೃಪೆ ತೋರಲಿಲ್ಲ

ಅಚ್ಯುತ ಕುಲಕರ್ಣಿ
Whatsapp 9424890064

Comments

Popular posts from this blog

ಶ್ರೀ ಗುರುರಾಯರ 775 ನೇ ಭಜನೆ

ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಮಿತ್ರ Naik