ವಿಷ್ಣು ಅಷ್ಟೋತ್ತರ: ಓಂ ಕೇಶವಾಯ ನಮಃ
ವಿಷ್ಣು ಅಷ್ಟೋತ್ತರ: ಓಂ ಕೇಶವಾಯ ನಮಃ
ಕೇಶವ ಹೆಸರಿಗೆ ವಿವಿಧ ಅರ್ಥಗಳಿವೆ. ಈ ಭಕ್ತಿರಚನೆ ಕೆಲ ಅರ್ಥಗಳನ್ನು ಒಳಗೊಂಡಿದೆ. ಉದ್ದ ಕೇಶವನ್ನುಳ್ಳ, ರಾಧೆಗೆ ಜಡೆಹಾಕುವ, ಶಿವ ಬ್ರಹ್ಮನ ಅಂಶವಿರುವ ಕೇಶಿ ರಾಕ್ಸಸನನ್ನು ಕೊಂದವನೆ ಕೇಶವ
ಜಗದ ಒಡೆಯ ಹೇ ಕೇಶವ
ವಂದನೆ ಸ್ವೀಕರಿಸು ಪ್ರಭುವೆ
ಬದುಕಿನ ಆಟವ ಸಲೀಸಾಗಿ
ದಾಟಿಸಲು ನೀನೇ ಬಾಧ್ಯವೆ. |ಪ|
ಸುಂದರ ಮುಖದ ಕೇಶವನೆ
ಉದ್ದ ಕೂದಲು ಶೋಭಿಸಿದೆ
ರಾಧೆಗೆ ನೀ ಹೆಣೆದಂಥ ಕೇಶ
ನಿನ್ನ ಪ್ರೀತಿ ರೂಪವ ತಿಳಿಸಿದೆ. |1|
ಬ್ರಹ್ಮ ಶಿವನ ಅಂಶ ಹೊಂದಿ
ದೇವರ ಏಕಸ್ವರೂಪ ಹೇಳಿದೆ
ಜಗದ ರಕ್ಷಣೆಯ ಭಾರವನ್ನು
ಎತ್ತುತ ಜಗದೊದ್ಧಾರಕನಾದೆ. |2|
ಜಗಕೆ ಬೆಳಕನು ಕೊಡುವಂಥ
ಸೂರ್ಯನಿಗೂ ನಿನ್ನ ಕೃಪೆಯು
ಬೆಳಕು ಮತ್ತು ಶಾಖ ನೀಡುತ
ಕೊಟ್ಟೆ ಪ್ರಜ್ವಲಿಸುವ ರೂಪವು. |3|
ಮತ್ತೆ ಮತ್ತೆ ಈ ಜಗಕೆ ಬರುತ
ಭಕ್ತರ ಉದ್ಧಾರವ ಮಾಡಿದವ
ಕೇಶಿ ರಾಕ್ಷಸನನ್ನು ಸಂಹರಿಸುತ
ಸೃಷ್ಟಿಗೆ ರಕ್ಷಣೆಯನು ಕೊಟ್ಟವ. |4|
ರಚನೆ ಅಚ್ಯುತ ಕುಲಕರ್ಣಿ
Comments
Post a Comment