ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು
ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು
ಭಕ್ತರಿಗೆ ವರನೀಡುವ ಕರುಣಾಮಯೀ ತಾಯಿಯ ಪಾದಕ್ಕೆ ನನ್ನೀ ಭಕ್ತಿ ಹಾಡು ಸಮರ್ಪಿಸಿರುವೆ
ಅಷ್ಟಲಕ್ಷ್ಮೀ ಅವತಾರಗಳಲಿ ಒಂದು
ವರಮಹಾಲಕ್ಷ್ಮಿ ದೇವಿಯೇ ನಿನ್ನದು
ಶ್ರಾವಣಮಾಸ ಏಕಾದಶಿ ದಿನವಿಂದು
ನಿನ್ನ ಪೂಜಿಪ ಸೌಭಾಗ್ಯ ನಮಗಿಂದು. |ಪ|
ಮನೆಗೆ ನಿನ್ನ ಆಗಮನದ ಕಾತರವಿದೆ
ನೀ ಬರುವೆಯೆಂದು ಹಬ್ಬವೇ ಕಾದಿದೆ
ಈ ಮನೆಗೆ ಶುಭ ಸಮೃದ್ಧಿಯ ವರವು
ಅಮ್ಮ ನಿನ್ನ ಕೃಪೆಯಲಿ ಎಲ್ಲ ಸುಖವು. |1|
ವರ ಕೊಡುವ ತಾಯಿ ಏನು ಕೇಳಲಿ
ಮನೆಯ ಹಿತ ಸದಾ ನಿನ್ನದೇ ಕೈಯಲಿ
ಕರುಣೆಯ ಸಾಕಾರದಿ ನಿನ್ನ ಅವತಾರ
ಸರ್ವಕಾಲಕೆ ನಿನ್ನಿಂದ ಭಕ್ತರ ಉದ್ಧಾರ. |2|
ಏಕಾದಶಿ ವೃತವನು ಸಂತಸದಿ ಮಾಡಿ
ಶೃಂಗರಿಸಿ ನಿನ್ನ ಹೂವಿನ ಅಲಂಕಾರದಿ
ನೈವೇದ್ಯ ಹಣ್ಣು ಹಂಪಲವ ಅರ್ಪಿಸುತ
ಪೂಜಿಸುವೆವು ನಿನ್ನ ಪ್ರಸನ್ನಗೊಳಿಸುತ. |3|
ಪ್ರತಿಮನೆಯ ಭಾಗ್ಯ ಅರಳಿಸುವ ನಿನ್ನ
ನೋಡು ಭಕ್ತೆ ಕಾಯ್ದಿರುವಳು ಈ ದಿನ
ಅರಳಿಸು ಸೌಭಾಗ್ಯ ಸಿರಿ ವರ ನೀಡುತ
ಈ ಮನೆಗೆ ರಕ್ಷೆಯಾಗಿ ಸದಾ ಕಾಯುತ. |4|
ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು
ಅಚ್ಯುತ ಕುಲಕರ್ಣಿ
WHatsapp9424890064
Comments
Post a Comment