ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು
ಧ್ವಜ ಹಿಡಿದ ಪುಟ್ಟ ಕಂದಮ್ಮ ನನ್ನ ಮೊಮ್ಮಗಳು ಅಂತರಾ

||ದೇಶಭಕ್ತಿಗೀತೆ||

ಎಂದೂ ಅಳಿಸದ ದಿವ್ಯ ಸಂಸ್ಕೃತಿಯ 
ಭಾರತ ದೇಶವಿದು ನಮ್ಮದು
ಹೆಮ್ಮೆಪಡುವ ಇತಿಹಾಸವನು ಹೊಂದಿದ
ಪುಣ್ಯಭೂಮಿಯಿದು ನಮ್ಮದು

ಮಹಾಪುರುಷರಿಗೆ ಜನ್ಮವನು ಕೊಟ್ಟ
ತಾಯಿನಾಡಿದು ನಮ್ಮದು
ಸತ್ಯ ಅಹಿಂಸೆ ನ್ಯಾಯ ಧರ್ಮಗಳ ಪಾಲನೆ
ದಿನದ ಉಸಿರಾಗಿಹುದು ನಮ್ಮದು

ವಿವಿಧ ಭಾಷೆಗಳ ವಿವಿಧ ವೇಷಗಳ
ವೈವಿಧ್ಯಪೂರ್ಣ ದೇಶವಿದು ನಮ್ಮದು
ವಿವಿಧ ಧರ್ಮಗಳು ಪೂರ್ಣ ಸ್ವತಂತ್ರತೆಯಲಿ
ಸಾಮರಸ್ಯದಿ ಇರುವ ನಾಡಿದು

ತತ್ವಜ್ಞಾನ, ಯೋಗ, ವಿಜ್ಞಾನ, ಎಲ್ಲ ಕ್ಷೇತ್ರದಲ್ಲಿ
ಮುಂದುವರೆದ ಪ್ರತಿಭೆ ನಮ್ಮದು
ಬಾಹ್ಯಾಕಾಶದಲ್ಲಿ ಎಲ್ಲರಿಗೆ ಮಿಗಿಲಾಗಿ ಹಾರುತ
ಹೆಮ್ಮೆಯ ಸಾಧನೆ ಪಡೆದ ನಾಡಿದು

ಪ್ರತಿ ಭಾರತೀಯ ಪ್ರತಿಜನ್ಮಕೆ ಹುಟ್ಟುವೆನಿಲ್ಲಿ
ಎಂದು ಹೃದಯದಿಂದ ಹೇಳುವ ನಾಡಿದು
ಭಾರತಮಾತೆಯ ಗರ್ವದ ಪುತ್ರರು ಎಂದು
ಅಭಿಮಾನವ ಹೊಂದಿದ ದೇಶ ನಮ್ಮದು

ಅಚ್ಯುತ ಕುಲಕರ್ಣಿ
Whatsapp9424890064

Comments

Popular posts from this blog

स्वातंत्र्य दिवस की हार्दिक शुभकामनाएं

ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು